ಸ್ನೇಹಿತರೆಲ್ಲ ಸೇರಿ ಹಲವು ಬಾರಿ ನಮ್ಮ ಬಿಡುವಿನ ವೇಳೆಯಲ್ಲಿ ಮನಸ್ಸಿಗೆ ಖುಷಿ ಕೊಡುವ ಯಾವುದಾದರೂ ಉದ್ಯಮ ಮಾಡಬೇಕೆಂದಿದ್ದೇವೆ. ನಮ್ಮಲ್ಲಿ ಬಹುಪಾಲು ಸಮಾಜಕಾರ್ಯ ಸ್ನಾತಕೋತ್ತರ ಪದವೀಧರರು.
ಇತ್ತೀಚೆಗೆ ಸ್ನೇಹಿತ ಪ್ರಕಾಶ್ ಈ ಕುರಿತು ಪ್ರಸ್ತಾಪಿಸಿದ. ಈಗಾಗಲೇ ಸುಮಾರು ಒಂದು ವರ್ಷದಿಂದ ಸಮಾನ ಮನಸ್ಕರೆಲ್ಲ ಸೇರಿ ನೆಟ್‍ವರ್ಕ್ ಫಾರ್ ಪ್ರೊಫೆಶನಲ್ ಸಪೋರ್ಟ್ ಎಂಬ ಸಂಸ್ಥೆ ನೋಂದಣಿ ಮಾಡಿಸಿದ್ದೇವೆ. ನಮ್ಮ ಸದಸ್ಯರಲ್ಲಿ ಬಹುಪಾಲು ಸದಸ್ಯರು ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಹಾಗಾಗಿ ಮಾನವ ಸಂಪನ್ಮೂಲದ ಕುರಿತಾಗಿ ಒಂದು ಪತ್ರಿಕೆ ತರಬೇಕೆಂದುಕೊಂಡಿದ್ದೇವೆ. ನೀವು ಈ ಪತ್ರಿಕೆಯ ಭಾಗವಾಗಿ ಕೆಲಸ ನಿರ್ವಹಿಸಬಹುದು ಹಾಗೂ ಸಲಹೆ ಸೂಚನೆಗಳನ್ನು ನೀಡಬಹುದು.
ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಿಳಿಸಿ, ಆಸಕ್ತರಿಗೆ ಸಭೆಯ ದಿನಾಂಕವನ್ನು ತಿಳಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ramesha.mh@gmail.com
No comments:
Post a Comment