ಸಮಾಜಕಾರ್ಯದಲ್ಲಿ ಪದವಿ ಪಡೆದ ಸಮಾನ ಮನಸ್ಕರ ತಂಡ
ಗೆಳೆಯರ
ಹಾಗೂ ಸಮಾನ ಮನಸ್ಕರ ಸಹಕಾರ ಹಾಗೂ ಪಾಲ್ಗೊಳ್ಳುವಿಕೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ
ಇತ್ತೀಚೆಗೆ ಬಿಡುಗಡೆಯಾದ ಲೂಸಿಯ ಸಿನಿಮಾದ ಯಶಸ್ವಿ ಒಂದು ಒಳ್ಳೆಯ ಉದಾಹರಣೆ. ಹಾಗೆಯೆ ಸಮಾಜಕಾರ್ಯದಲ್ಲಿ
ಸಮಾನ ಮನಸ್ಕರು ಸೇರಿ ಒಂದು ಒಳ್ಳೆಯ ತಂಡ, ಒಳ್ಳೆಯ ಕೆಲಸ ಮಾಡಲು ಈ ವೇದಿಕೆ ಬದ್ದ. ನೀವೂ ಪಾಲ್ಗೊಳ್ಳಿ
ಹಾಗೂ ಸಹಕರಿಸಿ. ಇದು ಆರಂಭ ನಿಮ್ಮೆಲ್ಲರ ಅಭಿಪ್ರಾಯ ಹಾಗೂ ಸಲಹೆಗಳಿಗೆ ಸ್ವಾಗತ.
1. ತಿಂಗಳಿಗೊಮ್ಮೆ ಸರ್ವ
ಸದಸ್ಯರ
ಸಭೆ
2. ಹಿರಿಯ ಸಮಾಜಕಾರ್ಯ ವೃತ್ತಿಪರರ ಆಹ್ವಾನ
3. ಸದಸ್ಯರ ವೃತ್ತಿಪರ ಅನುಭವಗಳನ್ನು ಹಂಚಿಕೊಳ್ಳುವ ವೇದಿಕೆ
4. ಸದಸ್ಯರ ಬಹುಮತದ ಆಧಾರದ ಮೇಲೆ ಯಾವುದೇ ವಿಷಯದ ಚರ್ಚೆ
5. ಪ್ರತಿ ತಿಂಗಳು ನಿಗದಿತ ದಿನಾಂಕ, ನಿಗದಿತ ಸಮಯಕ್ಕೆ ಸಭೆ ಸೇರುವುದು
6. ಸದಸ್ಯರು ಖಡ್ಡಾಯವಾಗಿ ಹಾಜರಾಗಿರತಕ್ಕದ್ದು, ಎರಡಕ್ಕಿಂತ ಹೆಚ್ಚು ಸಭೆಗಳನ್ನು ಹಾಜರಾಗದ ಸದಸ್ಯರುಗಳಿಗೆ ದಂಡ ಹಾಗೂ ಸದಸ್ಯತ್ವದಿಂದ ವಜ ಮಾಡಲಾಗುವುದು ಮತ್ತು
ಹಾಜರಾತಿ ಕಡಿಮೆ ಇರುವವರಿಗೆ ಚುನಾವಣ ಸಮಯದಲ್ಲಿ ಸ್ಪರ್ಧಿಸಲು ಅವಕಾಶವಿರುವುದಿಲ್ಲ
7. ವೃತ್ತಿಯಲ್ಲಿರುವ
ನಿರುದ್ಯೋಗಿಗಳಿಗೆ ಉದ್ಯೋಗದ ಮಾಹಿತಿ ನೀಡುವುದು
8. ವೃತ್ತಿಪರವಾದ
ನಿಲವುಗಳಿಗೆ ಸರ್ಕಾರದೊಂದಿಗೆ ಹೋರಾಟ
9. ಸಾಮಾಜಿಕ
ಸಮಸ್ಯೆಗಳಿಗೆ ಸ್ಪಂದಿಸುವುದು
ಮುಂದಿನ ಯೋಜನೆಗಳು
1. ಸಂಘದ ನೋಂದಣಿ ಮಾಡಿಸುವುದು
2. ಪದಾಧಿಕಾರಿಗಳ ಆಯ್ಕೆ
ಈ
ಮೇಲ್ಕಂಡ ಯಾವುದೇ ಅಂಶಗಳು ಅಂತಿಮವಲ್ಲ, ನಿಮ್ಮೆಲ್ಲರ ಚಿಂತನೆ, ಅನಿಸಿಕೆಗಳಿಗೆ ಮುಕ್ತ ಅವಕಾಶವಿದೆ.
No comments:
Post a Comment